Home » ಲೈವ್ ನ್ಯೂಸ್ » ಔರಾದ: ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಣಿ ಮಾಡಿಸಲು ರೈತಬಾಂಧವರಲ್ಲಿ ಮನವಿ

ಔರಾದ: ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಣಿ ಮಾಡಿಸಲು ರೈತಬಾಂಧವರಲ್ಲಿ ಮನವಿ

ಬೀದರ.25.ಜೂನ್.25:- ಅತಿವೃಷ್ಠಿ, ಅನಾವೃಷ್ಠಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2025-26ನೇ ಸಾಲಿನಲ್ಲಿ ಸಹ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಒಳಪಡುವ ವಿವಿಧ ಬೆಳೆಗಳಿಗೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಔರಾದ (ಬಿ) ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಯೂನಿವರ್ಸಲ್ ಸೋಂಪೊ ಜನರಲ್ ಇನ್‌ಶ್ಯೂರೆನ್ಸ್ ಕಂಪನಿಯನ್ನು ನಿಗದಿಪಡಿಸಲಾಗಿದೆ. ತೋಗರಿ (ಮ.ಆ), ಸೋಯಾಅವರೆ (ಮ.ಆ), ಸೋಯಾ ಅವರೆ (ನೀ), ಉದ್ದು (ಮ.ಆ), ಹೆಸರು (ಮ.ಆ), ನೆಲಗಡಲೆ (ಮ.ಆ.), ಮುಸುಕಿನ ಜೋಳ (ಮ.ಆ.), ಭತ್ತ (ಮ.ಆ), ಭತ್ತ (ನೀ), ಸಜ್ಜೆ (ಮ.ಆ.), ಎಳ್ಳು (ಮ.ಆ.), ಜೋಳ (ಮ.ಆ), ಹತ್ತಿ (ಮ.ಆ) ಬೆಳೆಗಳಿಗೆ ವಿಮಾ ಕಂತು ತುಂಬಲು ದಿನಾಂಕ: 31-07-2025 ಹಾಗೂ ಸೂರ್ಯಕಾಂತಿ (ಮ.ಆ.) ಬೆಳೆಗೆ ವಿಮಾ ಕಂತು ತುಂಬಲು ದಿನಾಂಕ: 16-08-2025 ಕೊನೆಯ ದಿನಾಂಕವಾಗಿರುತ್ತದೆ.


ಬೆಳೆ ಸಾಲ ಪಡೆಯದ ರೈತರು ನೋಂದಣಿಗಾಗಿ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ/ಪಾಸ್ ಬುಕ್ ಮತ್ತು ಆಧಾರ ಸಂಖ್ಯೆಯೊAದಿಗೆ ಡಿಸಿಸಿ/ಇತರೆ ಬ್ಯಾಂಕ್, ಗ್ರಾಮ-ಒನ್ ಮತ್ತು ಸಿ.ಎಸ್.ಸಿ.ಕೇಂದ್ರಗಳಿಗೆ ಸಂಪರ್ಕಿಸಬೇಕು ಹಾಗೂ ರೈತರು ನೋಂದಣಿಗಾಗಿ ಕಡ್ಡಾಯವಾಗಿ ಈಖUIಖಿS Iಆ (ಈIಆ) ಹೊಂದಿರಬೇಕು ಎಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology