Home » ರಾಜ್ಯ » ಐಟಿಐ ಪ್ರವೇಶಾತಿಗಾಗಿ ಆಫ್‌ಲೈನ್ ಅರ್ಜಿ ಆಹ್ವಾನ

ಐಟಿಐ ಪ್ರವೇಶಾತಿಗಾಗಿ ಆಫ್‌ಲೈನ್ ಅರ್ಜಿ ಆಹ್ವಾನ

ಬೀದರ.14.ಜೂನ್.25:- ಜಿಲ್ಲೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹುಮನಾಬಾದನಲ್ಲಿ ಅಗಸ್ಟ್-2025 ನೇ ಶೈಕ್ಷಣಿಕ ಸಾಲಿನ ಮೊದಲ ಸುತ್ತಿನ ಆನ್‌ಲೈನ್ ಪ್ರವೇಶಾತಿ ನಂತರ ಬಾಕಿ ಉಳಿದಿರುವ ಐಟಿಐ ಸೀಟುಗಳನ್ನು ಆಫ್‌ಲೈನ್‌ನಲ್ಲಿ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಹುಮನಾಬಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣರಾಗಿರುವ ಅರ್ಹ ಆಸಕ್ತ ಅಭ್ಯರ್ಥಿಗಳು ದಿನಾಂಕ: 31-08-2025 ವರೆಗೆ ನೇರವಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿssಸಬಹುದು.

ಅರ್ಜಿ ಸಲ್ಲಿssಸಿದ ಮರು ದಿನ ಆಫ್‌ಲೈನ್ ನಲ್ಲಿ ಮೆರಿಟ್ ಆಧಾರದ ಮೇಲೆ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲಾಗುವುದು.

ಬಾಕಿ ಉಳಿದಿರುವ ವೃತ್ತಿಗಳ ಸೀಟುಗಳು  MRAC-19, Fitter-16, CNC-20, MEV-22, IRDMT-20, MPCA-24, VAAD-24, EDT-10     ಭರ್ತಿಯಾಗುವವರೆಗೆ ನೇರ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9449041472, , 7483148185, 9448150536 9741003618 ಹಾಗೂ 9448100294 ಸಂಪರ್ಕಿಸಲು ಸಂಸ್ಥೆಯ ಪ್ರಾಚಾರ್ಯರು ತಿಳಿಸಿರುತ್ತಾರೆ.

Author

ಪ್ರಮುಖ ಸುದ್ದಿ

Stock market

Astrology