Home » ಲೈವ್ ನ್ಯೂಸ್ » ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ಮುಂದೆ 625 ಅಲ್ಲ 525 ಅಂಕಗಳು…

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ಮುಂದೆ 625 ಅಲ್ಲ 525 ಅಂಕಗಳು…

ಬೆಂಗಳೂರು.05.ಏಪ್ರಿಲ್.26:ನಿನ್ನೆಯಷ್ಟೇ ಒಂದನೇ ತರಗತಿ ದಾಖಲಾತಿಗೆ 60 ದಿನಗಳ ವಯೋಮಿತಿ ಅಂತಹ ಮಹತ್ವ ಘೋಷಣೆ ಮಾಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಮತ್ತೊಂದು ದೊಡ್ಡ ಘೋಷಣೆ ಮಾಡಿದ್ದಾರೆ. ಅದೇನೆಂದರೆ, ಈ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ( SSLC Exam ) ಅಂಕವನ್ನು 625ಕ್ಕೆ ಬದಲಾಗಿ 525ಕ್ಕೆ ನಿಗದಿ ಮಾಡಲಾಗಿದೆ.

ಇಂದು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕವನ್ನು ಈ ವರ್ಷದಿಂದಲೇ 625 ರಿಂದ 525ಕ್ಕೆ ಇಳಿಸಿರುವುದಾಗಿ ಘೋಷಣೆ ಮಾಡಿದರು. ಅಲ್ಲದೆ, ತೃತೀಯ ಭಾಷೆಗೆ ಗ್ರೇಡ್ ಪದ್ದತಿ ಜಾರಿಗೆ ತಂದಿರುವುದಾಗಿ ತಿಳಿಸಿದರು. ಈ ಮೂಲಕ ಹಿಂದಿ, ಉರ್ದು, ಕೊಂಕಣಿ ಸೇರಿದಂತೆ ಇತರೆ ಮೂರನೇ ಭಾಷೆಗಳಿಗೆ ಗ್ರೇಡ್ ಪದ್ಧತಿ ಅನ್ವಯವಾಗಲಿದೆ ಎಂದರು.

ಹಿಂದಿ ಪರೀಕ್ಷೆಯಿಂದ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು. ತೃತೀಯ ಭಾಷೆಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ, 100 ಅಂಕಗಳು ಇರುವುದಿಲ್ಲ. ಅದನ್ನು ಎ, ಬಿ, ಸಿ ಹಾಗೂ ಡಿ ಗ್ರೇಡ್ ಆಧಾರದಲ್ಲಿ ನಿರ್ಧಾರ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದರು.
ಈಗಾಗಲೇ ಶುರುವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷಯಿಂದಲೇ ಈ ಆದೇಶ ಜಾರಿಯಾಗಲಿದೆ. ಪರೀಕ್ಷೆ ಮಾತ್ರ 6 ವಿಷಯಗಳಿಗೂ ನಡೆಯಲಿದೆ. ಆದರೆ, ಅಂಕಗಳು ಮಾತ್ರ 525ಕ್ಕೆ ನಿರ್ಧಾರ ಮಾಡಲಾಗುತ್ತದೆ. ತೃತೀಯ ಭಾಷೆಯ ಅಂಕವನ್ನು ಗ್ರೇಡ್ ಆಧಾರದ ಮೇಲೆ ನಿಗದಿ ಮಾಡಲಾಗುವುದು ಎಂದರು.

Author

ಪ್ರಮುಖ ಸುದ್ದಿ

Stock market

Astrology