Home » ಲೈವ್ ನ್ಯೂಸ್ » ಎಚ್ಚರ ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ:

ಎಚ್ಚರ ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುಗಡೆ:

ಬೀದರ.03.ಜನವರಿ.26:- ಕಾರಂಜಾ ಯೋಜನೆಯ ಬಲದಂಡೆ, ಎಡದಂಡೆ, ಕಾರಂಜಾ ಏತ ನೀರಾವರಿ ಕಾಲುವೆ ಹಾಗೂ ಅತಿವಾಳ ಏತ ನೀರಾವರಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ಬೆಳೆದ ಹಿಂಗಾರು ಬೆಳಿಗಳಿಗಾಗಿ ಕಾಲುವೆಯಲ್ಲಿ ನೀರು ಹರಿಬಿಡಲು ಹಾಗೂ ಈ ವರ್ಷ ಮಳೆ ಬಹಳ ಜಾಸ್ತಿ ಆಗಿ, ಒಂದೇ ಸಲ ನಿಂತು ಬಿಟ್ಟಿದೆ. ಹೀಗಾಗಿ ಹೊಲಗಳು ಗಟ್ಟಿ ಆಗಿವೆ.

ಆದ್ದರಿಂದ ರೈತರ ಹೊಲಗಳಿಗೆ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸಿದರೆ ರೈತರ ಬೆಳೆಗಳಾದ ಜೋಳ, ತೊಗರಿ, ಗೋಧಿ ಹಾಗೂ ಕಡ್ಲೆಗೆ ಅನುಕೂಲವಾಗುತ್ತದೆ.

ಪ್ರಯುಕ್ತ, ಎಲ್ಲಾ ರೈತ ಸಂಘದ ಮುಖಂಡರು ಕಾಲುವೆಯ ಮೂಲಕ ನೀರು ಹರಿಸಲು ಕೋರಿರುತ್ತಾರೆ. ಪ್ರಯುಕ್ತ ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು, ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ಹಂತಹवತವಾಗಿ ಕಾಲುವೆಗಳಿಗೆ ನೀರು ಹರಿಸಲಾಗುವುದು.

ಆದಕಾರಣ ಕಾಲುವೆಯ ಹತ್ತಿರ ಅಕ್ಕಪಕ್ಕದ ಜನರು, ಸಾರ್ವಜನಿಕರು ಇಳಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಈಜುವುದಾಗಲಿ, ದನಕರುಗಳಿಗೆ ನೀರು ಕುಡಿಸುವುದಾಗಲಿ ಮಾಡಬಾರದೆಂದು ಬೀದರ ಕೆಪಿಸಿ ವಿಭಾಗ ನಂ. 1, ಕನೀನಿನಿ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology