Home » ಲೈವ್ ನ್ಯೂಸ್ » ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪಿ ಕ್ಯಾಲೆಂಡರ್‌ ಜಾರಿ

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪಿ ಕ್ಯಾಲೆಂಡರ್‌ ಜಾರಿ

ಬೆಂಗಳೂರು.27.ಮೇ.25:- ರಾಜ್ಯ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ರಾಜ್ಯದ ಎಲ್ಲ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಏಕ ಕಾಲದಲ್ಲಿ ತರಗತಿ ಆರಂಭಿಸಲಿವೆ.

2025 -26ನೇ ಶೈಕ್ಷ ಣಿಕ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ವಿ.ವಿ.ಗಳು, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಸಂಬಂಧಿಸಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿಯನ್ನು ಪಾಲಿಸಬೇಕು ಮತ್ತು ಈ ಬಗೆಗಿನ ಅನುಪಾಲನೆ ವರದಿ ನೀಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಜೂ. 9ರಂದು ಪದವಿ ಆರಂಭ
ರಾಜ್ಯದ ಎಲ್ಲ ಪದವಿ ಕಾಲೇಜುಗಳು ಜೂ. 9ರಂದು ಆರಂಭ ವಾಗಲಿದ್ದು, 1, 3ನೇ ಮತ್ತು 5ನೇ ಸೆಮಿಸ್ಟರ್‌ಗಳು ಸೆ. 26ಕ್ಕೆ ಕೊನೆಗೊಳ್ಳಲಿವೆ. ಪರೀಕ್ಷೆಗಳು ಸೆ. 29ರಂದು ಆರಂಭವಾಗಲಿವೆ. ಸೆ. 29ರಿಂದ ನ. 10ರ ವರೆಗೆ ರಜೆ ಇದ್ದು, ಇದೇ ಅವಧಿಯಲ್ಲಿ ಥಿಯರಿ, ಪ್ರ್ಯಾಕ್ಟಿಕಲ್‌ ಪರೀಕ್ಷೆಗಳು, ಮೌಲ್ಯಮಾಪನ ಮತ್ತು ಫ‌ಲಿತಾಂಶ ಪ್ರಕಟನೆ ನಡೆಯಲಿದೆ. 2, 4 ಮತ್ತು 6ನೇ ಸೆಮಿಸ್ಟರ್‌ ನ. 12ರಿಂದ ಆರಂಭಗೊಂಡು 2026ರ ಫೆ. 24ರ ವರೆಗೆ ಇರಲಿದೆ. ಎ. 6ರವರೆಗೆ ಪರೀಕ್ಷೆಗಳು, ಮೌಲ್ಯಮಾಪನ, ಫ‌ಲಿತಾಂಶ ಪ್ರಕಟಗೊಳ್ಳಲಿವೆ.

ಸೆ. 1ರಿಂದ ಸ್ನಾತಕೋತ್ತರ ತರಗತಿ
ಸ್ನಾತಕೋತ್ತರ ಪದವಿಯ ದಾಖಲಾತಿ ಪ್ರಕ್ರಿಯೆ ಆ. 19ರಂದು ಆರಂಭವಾಗಲಿದ್ದು, 1, 3ನೇ ಸೆಮಿಸ್ಟರ್‌ ಸೆ. 1ರಂದು ಪ್ರಾರಂಭ ಗೊಳ್ಳಲಿದೆ. ಈ ಸೆಮಿಸ್ಟರ್‌ಗಳು ಡಿ. 19ಕ್ಕೆ ಕೊನೆಗೊಳ್ಳಲಿದ್ದು, ಡಿ. 22ರಂದು ಪರೀಕ್ಷೆಗಳು ಆರಂಭಗೊಳ್ಳಲಿವೆ. ಡಿ. 23ರಿಂದ ರಜೆ, ಪರೀಕ್ಷೆ, ಮೌಲ್ಯಮಾಪನ ಮತ್ತು ಫ‌ಲಿತಾಂಶ ಪ್ರಕಟನೆ ನಡೆಯಲಿದ್ದು 2026ರ ಫೆ. 2ರಂದು ಈ ಸೆಮಿಸ್ಟರ್‌ಗಳ ಶೈಕ್ಷಣಿಕ ಚಟುವಟಿಕೆ ಮುಕ್ತಾಯಗೊಳ್ಳಲಿದೆ. 2 ಮತ್ತು 4ನೇ ಸೆಮಿಸ್ಟರ್‌ ತರಗತಿಗಳು ಮಾ. 3ರಂದು ಆರಂಭಗೊಳ್ಳಲಿದ್ದು, ಜೂ. 23ಕ್ಕೆ ಮುಕ್ತಾಯಗೊಳ್ಳಲಿವೆ. ಜೂ. 25ರಿಂದ ಪರೀಕ್ಷೆಗಳು, ಮೌಲ್ಯಮಾಪನ, ಫ‌ಲಿತಾಂಶ ಪ್ರಕಟನೆ ನಡೆಯಲಿದ್ದು ಆ. 10ರಂದು ಸೆಮಿಸ್ಟರ್‌ ಪೂರ್ಣಗೊಳ್ಳಲಿದೆ.

ರಾಕೇಶ್‌ ಎನ್‌.ಎಸ್‌.ಉನ್ನತ ಶಿಕ್ಷಣಕ್ಕೆ ಏಕರೀತಿಯ ಕ್ಯಾಲೆಂಡರ್‌ ಬೇಕು ಎಂಬುದು ಕೆಲವು ವರ್ಷ ಗಳಿಂದ ಚರ್ಚೆಯ ಹಂತ ದಲ್ಲಿತ್ತು. ಈ ನಿಟ್ಟಿನಲ್ಲಿ ಪ್ರಯತ್ನ ಗಳು ನಡೆದಿದ್ದರೂ ಸಾಕಾರ ಗೊಂಡಿರಲಿಲ್ಲ. ಉನ್ನತ ಶಿಕ್ಷಣ ಪರಿಷತ್‌ ಏಕರೂಪದ ಶೈಕ್ಷಣಿಕ ವೇಳಾ ಪಟ್ಟಿ ಹೊರಡಿಸುತ್ತಿದ್ದರೂ ಆಯಾ ವಿ.ವಿ.ಗಳು ಹೊರಡಿಸುವ ವೇಳಾ ಪಟ್ಟಿ ಯಂತೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು. ಇದರಲ್ಲಿ ಏಕರೂಪತೆ ಇರದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಕಳೆದ ಅಕ್ಟೋಬರ್‌ನಲ್ಲಿಯೇ 2025- 26ನೇ ಶೈಕ್ಷಣಿಕ ಸಾಲಿನ ಉನ್ನತ ಶಿಕ್ಷಣದ ವೇಳಾಪಟ್ಟಿ ಪ್ರಕಟಿಸಿ, ಅದರಂತೆ ಕಾಲೇಜುಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಏಕರೂಪದ ಕ್ಯಾಲೆಂಡರ್‌ ಜಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

2025-26ನೇ ಸಾಲಿನಲ್ಲಿ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲ ಕಾಲೇಜು ಗಳು ಇದನ್ನು ಪಾಲನೆ ಮಾಡ ಬೇಕು. ಪ್ರಾದೇಶಿಕ ಜಂಟಿ ನಿರ್ದೇ ಶಕರು ತಮ್ಮ ಕಚೇರಿಯ ವ್ಯಾಪ್ತಿಗೆ ಒಳ ಪಡುವ ಕಾಲೇಜು ಗಳು ಈ ವೇಳಾಪಟ್ಟಿ ಯನ್ನು ಅನುಸರಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಜೂ. 2ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
-ಎನ್‌. ಮಂಜುಶ್ರೀ, ಆಯುಕ್ತೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

ರಾಕೇಶ್‌ ಎನ್‌.ಎಸ್‌.

Author

ಪ್ರಮುಖ ಸುದ್ದಿ

Stock market

Astrology