Home » ಲೈವ್ ನ್ಯೂಸ್ » ಉನ್ನತ ಶಿಕ್ಷಣ ಇಲಾಖೆಯ ಕಾನೂನು ಉಲ್ಲಂಘಿಸಿದವರನ್ನು ಕೆಲಸದಿಂದ ವಜಾಗೊಳಿಸಲಿದೆ.

ಉನ್ನತ ಶಿಕ್ಷಣ ಇಲಾಖೆಯ ಕಾನೂನು ಉಲ್ಲಂಘಿಸಿದವರನ್ನು ಕೆಲಸದಿಂದ ವಜಾಗೊಳಿಸಲಿದೆ.

ಬೆಂಗಳೂರು.31.ಜನವರಿ.26: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಪಿಎಚ್.ಡಿ ನೈಜತೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ಸಮೀತಿ ರಚನೆ ಮಾಡಲಾಗಿದೆ.

ರಾಜ್ಯದಲ್ಲಿ ಅನೇಕ ಅನುದಾನಿತ ಪದವಿ ಕಾಲೇಜುಗಳಲ್ಲೂ ಕೆಲವರು ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿರುವ ಅನುಮಾನ ಮಾಡಲಾಗಿದೆ.

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಯಾದ ಅತಿಥಿ ಉಪನ್ಯಾಸಕರು, ಪದವಿಯ ನೈಜತೆ ಪ್ರಮಾಣಪತ್ರ ಕೊಡಬೇಕೆಂದು ಆದೇಶಿಸಿರುವುದು ಸ್ವಾಗತಾರ್ಹ. ಇತ್ತೀಚೆಗೆ ಐದಾರು ಲಕ್ಷ ರೂಪಾಯಿ ಕೊಟ್ಟು ಹೊರರಾಜ್ಯಗಳಿಂದ ಪಿಎಚ್.ಡಿ ಪದವಿ ಪ್ರಮಾಣಪತ್ರ ಪಡೆಯುತ್ತಿರುವ ದಂಧೆ ಹೆಚ್ಚಿದೆ. ಈ ನಕಲಿ ಪಿಎಚ್‌.ಡಿ ಹಾವಳಿ ಅತಿಥಿ ಉಪನ್ಯಾಸಕರಿಗಷ್ಟೆ ಸೀಮಿತವಾಗಿಲ್ಲ.

2009ರಲ್ಲಿ ಪದವಿ ಕಾಲೇಜುಗಳಿಗೆ ನೇಮಕವಾಗಿರುವ ಕೆಲವು ಸಹಾಯಕ ಪ್ರಾಧ್ಯಾಪಕರು ಬಡ್ತಿ ಹಾಗೂ ಹೆಚ್ಚಿನ ಸಂಬಳದ ಆಸೆಗಾಗಿ ಕಳ್ಳಮಾರ್ಗದಲ್ಲಿ ನಕಲಿ ಡಾಕ್ಟರೇಟ್ ಪದವಿ ಪಡೆದಿರುವ ಶಂಕೆಯಿದೆ. ಅನುದಾನಿತ ಪದವಿ ಕಾಲೇಜುಗಳಲ್ಲೂ ಕೆಲವರು ನಕಲಿ ಪಿಎಚ್.ಡಿ ಪ್ರಮಾಣಪತ್ರ ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿರುವ ಸಾಧ್ಯತೆಯಿದೆ. ಹಾಗಾಗಿ, ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲನೆಗಾಗಿ ಉನ್ನತ ಶಿಕ್ಷಣ ಇಲಾಖೆಯು ಸಮಿತಿ ರಚಿಸಬೇಕಿದೆ. ಕಾನೂನು ಉಲ್ಲಂಘಿಸಿದವರನ್ನು ಕೆಲಸದಿಂದ ವಜಾಗೊಳಿಸಬೇಕಿದೆ.

ಹೊನ್ನಪ್ಪ ಹೊನ್ನಪ್ಪನವರ, ಹಾವೇರಿ

Author

ಪ್ರಮುಖ ಸುದ್ದಿ

Stock market

Astrology