Home » ಲೈವ್ ನ್ಯೂಸ್ » ಉಚಿತ ಬ್ಯೂಟಿ ಪಾರ್ಲರ್, ಮಹಿಳಾ ಟೈಲರ್ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ಉಚಿತ ಬ್ಯೂಟಿ ಪಾರ್ಲರ್, ಮಹಿಳಾ ಟೈಲರ್ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ

ರಾಯಚೂರು.28.ಜುಲೈ.25:- ಇಲ್ಲಿನ ಸ್ಟೇಟ್ ಬ್ಯಾಂಕ್‌ಆಫ್‌ಇoಡಿಯಾ, ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆ (ಆರ್‌ಸೇಟಿ) ಇವರ ವತಿಯಿಂದ ಗ್ರಾಮೀಣ ನಿರುದ್ಯೋಗಿ ಮಹಿಳೆಯರಿಗಾಗಿ ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ಹಾಗೂ ಮಹಿಳಾ ಟೈಲರ್ ವೃತ್ತಿ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಆಸಕ್ತರು 8ನೇ ತರಗತಿ ವ್ಯಾಸಂಗ ಮಾಡಿರುವ 18 ರಿಂದ 45 ವರ್ಷದೊಳಗಿನ ವಯಸ್ಸು ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳು ಆಧಾರ್ ಕಾರ್ಡ್ ಜೆರಾಕ್ಸ್, ಗ್ರಾಮೀಣ ಪಡಿತರ ಚೀಟಿ (ಬಿಪಿಎಲ್, ಪಿಎಚ್‌ಎಚ್, ಎನ್‌ಪಿಎಚ್‌ಎಚ್ ಮತ್ತು ಆಯ್‌ವೈ) ಜೆರಾಕ್ಸ್,. 4 ಫೋಟೋಗಳು, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಹಾಗೂ ಪ್ಯಾನ್ ಕಾರ್ಡ್ ಜೆರಾಕ್ಸ್ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ಉಚಿತ ವಸತಿ ಸೌಕರ್ಯದ ವ್ಯವಸ್ಥೆ ಇರುತ್ತದೆ.


ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು ಸ್ಟೇಟ್ ಬ್ಯಾಂಕ್‌ಆಫ್‌ಇoಡಿಯಾ, ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆ (ಆರ್‌ಸೇಟಿ) ಆಶಾಪೂರುರಸ್ತೆ, ರಾಯಚೂರು. ಮೊಬೈಲ್ ಸಂಖ್ಯೆ: 8217382735 ಹಾಗೂ 9742470999ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology