Home » ಲೈವ್ ನ್ಯೂಸ್ » ಆಧುನಿಕ ಹೈನುಗಾರಿಕೆ ತರಬೇತಿ: ಹೆಸರು ನೋಂದಾಯಿಸಲು ಸೂಚನೆ

ಆಧುನಿಕ ಹೈನುಗಾರಿಕೆ ತರಬೇತಿ: ಹೆಸರು ನೋಂದಾಯಿಸಲು ಸೂಚನೆ

ಬೀದರ,25.ಡಿಸೆಂಬರ್.25: ಬೀದರ ಜಿಲ್ಲೆಯರೈತ ಬಾಂಧವರಲ್ಲಿ ಸಹರ್ಷದಿಂದ ತಿಳಿಯಪಡಿಸುವುದೇನೆಂದರೆ, “ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ”, ಜಿಲ್ಲಾ ಕೇಂದ್ರ ಗ್ರಂಥಾಲಯ ಹಿಂಭಾಗ ಬೀದರನಲ್ಲಿ ದಿನಾಂಕ: 29-12-2025 ರಿಂದ 30-12-2025 ರವರೆಗೆ ಆಧುನಿಕ ಹೈನುಗಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದರ ಸದುಪಯೋಗವನ್ನು ಜಾನುವಾರು ಮಾಲೀಕರು ರೈತ ಬಾಂಧವರು ಪಡೆಯಬೇಕಾಗಿ ಬೀದರ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ ಜಿಲ್ಲೆಯ ರೈತರು ತರಬೇತಿಗೆ ಹಾಜರಾಗುವ ಸಮಯದಲ್ಲಿ ಆಧಾರಕಾರ್ಡ್ ಪ್ರತಿ ಹಾಗೂ ಇತ್ತೀಚಿನ ಎರಡು ಭಾವಚಿತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ಆಸಕ್ತರು ಮುಂಚಿತವಾಗಿ ವಾಟ್ಸ್‍ಪ್ ಮೂಲಕ ತಮ್ಮ ಹೆಸರು ಮತ್ತು ಮೊಬೈಲ ಸಂಖ್ಯೆಯೊಂದಿಗೆ ನೋಂದಾಯಿಸಲು ತಿಳಿಸಿದೆ.

40 ರೈತರಿಗೆತರಬೇತಿಗೆಅವಕಾಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9902561957 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology