Home » ಲೈವ್ ನ್ಯೂಸ್ » ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಬೀದರ.07.ಸೆಪ್ಟೆಂಬರ್.25:- 2025-26ನೇ ಸಾಲಿನ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಸಂಬoಧಿಸಿದoತೆ, ಮಾನ್ಯ ಮುಖ್ಯಮಂತ್ರಿಗಳು 2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 222 ರಲ್ಲಿ “ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50000 ರೂ ನೀಡಲಾಗುವುದು” ಎಂದು ಘೋಷಿಸಿರುತ್ತಾರೆ.

ಮುಂದುವರೆದು, ಸರ್ಕಾರದ ಆದೇಶದಲ್ಲಿ 2025-26ನೇ ಸಾಲಿನ ಆಯವ್ಯಯ ಭಾಷಣದ “ಕಂಡಿಕೆ ಸಂಖ್ಯೆ 222 ರಲ್ಲಿ ಘೋಷಿಸಿರುವಂತೆ” ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.50 ಸಾವಿರ ನೀಡುವ ಕಾರ್ಯಕ್ರಮವನ್ನು ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಲಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೀದರ, ಮೌಲಾನಾ ಆಜಾದ ಭವನ, ಗುರುನಾನಕ ಝಿರಾ ದಿಂದ ಚಿಕ್‌ಪೇಟ ರಿಂಗ್ ರಸ್ತೆ, ಬೀದರ-585403 ಗೆ ಅಥವಾ ದೂರವಾಣಿ ಸಂಖ್ಯೆ: 80482-295210 ಗೆ ಸಂಪರ್ಕಿಸಬಹುದಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆ ಸಹಾಯವಾಣಿ: ಔರಾದ್ -ಬಿ 6361879744, ಮಾಹಿತಿ ಕೇಂದ್ರ 9972875868, ಬಸವಕಲ್ಯಾಣ: 9739438240 ಮಾಹಿತಿ ಕೇಂದ್ರ ಸಹಾಯವಾಣಿ 9743037911, ಭಾಲ್ಕಿ 9739438240 ಮಾಹಿತಿ ಕೇಂದ್ರ ಸಹಾಯವಾಣಿ 7760601867, ಬೀದರ 8660072584 ಮಾಹಿತಿ ಕೇಂದ್ರ ಸಹಾಯವಾಣಿ 9036642536, ಹುಮನಾಬಾದ್ 6361879744, ಮಾಹಿತಿ ಕೇಂದ್ರ ಸಹಾಯವಾಣಿ 6360685910 ಹಾಗೂ ಅಲ್ಪಸಂಖ್ಯಾತರ ರಾಜ್ಯ ಸಹಾಯವಾಣಿ-8277799990 ಗೆ ಸಂಪರ್ಕಿಸಬಹುದಾಗಿದೆ ಎಂದು ಬೀದರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology